Tuesday, February 7, 2012

ವಿಷಯ - 02

"ಸರ್ಕಾರದ ಕೆಲಸ ದೇವರ ಕೆಲಸ" ಎಂದು ವಿಧಾನಸೌಧದ ಮುಂದೆ ದೊಡ್ಡದಾಗಿ ಕಾಣುತ್ತದೆ. ಕರ್ನಾಟಕ ರಾಜ್ಯದ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳು ಸಿಗಲಿ, ಜನಪರ ಚಟುವಟಿಕೆಗಳು ನಡೆಯಲಿ,ತಮ್ಮ ಊರು - ಜಿಲ್ಲೆಗಳ ಉದ್ದಾರಕ್ಕಾಗಿ ನಾವುಗಳು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸುತ್ತೇವೆ. ಆದರೆ ಜನಪ್ರತಿನಿಧಿಗಳನ್ನು ತಾವುಗಳು ಚುನಾವಣೆಯಲ್ಲಿ ಗೆಲ್ಲುವವರೆಗೆ ಮಾತ್ರ ಅಣ್ಣಾ, ಅಕ್ಕಾ .. ಅಂತಾ ಕಾಲು ಹಿಡಿಯುತ್ತಾರೆ. ನಂತರದ ದಿನಗಳಲ್ಲಿ ಎಲ್ಲವನೂ ಮರೆತು ಸರ್ಕಾರದ ಖಜಾನೆಯಲ್ಲಿ ಹಗಲು ದರೋಡೆ ಮಾಡುವುದನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ ಹಾಗೂ ನೋಡುತ್ತಲೂ ಇದ್ದೇವೆ. ಇಂತಹ ಭ್ರಷ್ಟಚಾರದ ಹಣೆಪಟ್ಟಿ ಹೊತ್ತು ಈಗಾಗಲೇ ಜೈಲು ಸೇರಿದವರಿಗೂ ಲೆಕ್ಕವಿಲ್ಲ. ಹಾಗೇ ಜೈಲು ಸೇರುವುದು ಕೂಡ ತಮಗೊಂದು ಹೆಮ್ಮೆಯ ಗರಿಯೆಂಬಂತೆ ಸಾಲು ಸಾಲು ಜನಪ್ರತಿನಿಧಿಗಳು ಜೈಲಿಗೆ ಹೋದರು, ಬಂದರು.. ಇನ್ನೂ ಬರದವರು ಕೂಡ ಇದ್ದಾರೆ.

ಈ ಎಲ್ಲಾ ವಿದ್ಯಮಾನಗಳಿಂದ ರಾಜ್ಯದ ಜನತೆ ರೋಸಿ ಹೋಗಿರುವುದಂತು ನಿಜ. ಪ್ರಜೆಗಳ ಹಿತ, ರಾಜ್ಯದ ಕ್ಷೇಮಕ್ಕಾಗಿ ನಡೆಯುವ ವಿಧಾನಸಭಾ ಕಲಾಪಗಳಲ್ಲಿ ತೀರಾ ಇತ್ತೀಚೆಗೆ (ಅಂದರೆ 07.02.2012ರಂದು) ಮಾನ್ಯ ಸಚಿವರಾದ ಲಕ್ಷ್ಮಣ ಸವದಿ ಯವರು ನೀಲಿ ಚಿತ್ರ ವೀಕ್ಷಣೆ ಮಾಡಿರುವ ವಿಷಯ ತಿಳಿದಿರಬಹುದು. ಇಂತಹ ವಿಚಾರಗಳ ಬಗ್ಗೆ ಮಾತನಾಡಲು ಸಹ ನಮಗೆ ಅಸಹ್ಯ ಹುಟ್ಟುತ್ತದೆ. ಅಂತಹುದರಲ್ಲಿ ಈ ಸಚಿವರು ನಿನ್ನೆ ಪತ್ರಿಕಾಗೋಷ್ಟಿ ಕೂಡ ಕರೆದು ನಾನು ಮಾಡಿದ್ದು ಅಂತಾ ಮಹಾ ತಪ್ಪೇನಲ್ಲ. ನಾವು ಉಡುಪಿಯಲ್ಲಿ ನಡೆದ ರೇವ್ ಪಾರ್ಟಿಯ ಕುರಿತು ಚರ್ಚಿಸುತ್ತಾ ಇದ್ದೆವು. ಹಾಗೇ ಹೀಗೆ ಅಂತಾ ಏನೇನೋ ಹೇಳುತ್ತಾ ರಾಜ್ಯದ ಜನತೆಗೆ ಕಣ್ಣಿಗೆ ನೇರವಾಗಿ ಮಣ್ಣೆರುಚುವ ಕೆಲಸ ಮಾಡಿದರು (ಎಲ್ಲಾ ಸಾಕ್ಷಿ ಪುರಾವೆಗಳು ಇದ್ದರೂ ಸಹ).

ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಗೌರವಕ್ಕೆ ಧಕ್ಕೆ ತಂದಿರುವ ಹಾಗೂ ತರುತ್ತಲೇ ಇರುವ ಇಂತಹ ಜನಪ್ರತಿನಿಧಿಗಳು ನಮಗೆ ಬೇಕಾ? ಇವರುಗಳ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಕೆಳಗೆ ಕಾಮೆಂಟು ಮಾಡಿ. ಈ ಚರ್ಚೆಯಲ್ಲಿ ಪಾಲ್ಗೋಳ್ಳಿ.....

3 comments:

  1. ರಾಜ್ಯದ ಇತಿಹಾಸದಲ್ಲಿಯೇ ಈ ರೀತಿ ಸಚಿವರು ಬಹಿರಂಗವಾಗಿ ಸದನದೊಳಗೆ ಮೊಬೈಲ್ ಮೂಲಕ ನೀಲಿ ಚಿತ್ರ ವೀಕ್ಷಿಸಿರುವುದು ಖಂಡನಿಯ. ಮಾಡಿದ್ದು, ಪಕ್ಷದೊಳಗೆಯೇ ಅವರ
    ಶಿಸ್ತಿನ ಪಕ್ಷವೆಂದು ಹೇಳುತ್ತಿರುವ ಬಿಜೆಪಿ ಸರಕಾರದ ಸಚಿವರೇ ಬಹಿರಂಗವಾಗಿ ಸದನದೊಳಗೆ ಬ್ಲೂಫಿಲಂ ನೋಡುತ್ತಿದ್ದದ್ದು, ಆ ಪಕ್ಷ ಯಾವ ಮಟ್ಟಿನಲ್ಲಿದೆ ಎಂಬುದಕ್ಕೆ ಸಾಕ್ಷಿ .

    ReplyDelete
  2. anukulakkae takkantae badalago namagae ondu vishaya nenapirabeku " etihasa marukalisuttae " anno vishaya... ega niv madadannae nim next generation madodu... love ur parents.. they r more for us...

    ReplyDelete