ತಾಯಿ-ತಂದೆ ಇಬ್ಬರು, ಕಣ್ಣಿಗೆ ಕಾಣೋ ದೇವರು..!! ಎಂದು ಕೇಳಿದ್ದೇವೆ, ಹಾಡಿದ್ದೇವೆ. ಹಗಲು ರಾತ್ರಿಯೆನ್ನದೇ ಕಷ್ಟ ಪಟ್ಟು, ಮೊಳಕೆಯಲ್ಲಿರುವ ನಮ್ಮನ್ನು ಅತೀವ ಪ್ರೀತಿಯಿಂದ ಸಾಕಿ ಸಲಹಿ, ನಮ್ಮ ಬಾಲ್ಯದಲ್ಲಿ ನಮ್ಮನ್ನು ತಿದ್ದಿ ತೀಡಿ, ಬುದ್ದಿವಂತರಾಗಿ ಮಾಡಿದ ತಂದೆ ತಾಯಿಗಳು ನಾವು ಯೌವನಾವಸ್ಥೆಗೆ ತಲುಪಿದ ನಂತರದ ದಿನಗಳಲ್ಲಿ ಹಾಗೂ ಮನದನ್ನೆ ಮನೆಯಲ್ಲಿ ಬಂದಾದ ನಂತರದಲಿ ಹೆತ್ತವರು ಬೇಡವೆನಿಸಿ, ಅಥವಾ ಅವರನ್ನು ಸಾಕುವುದು ಹೊರೆಯೆನಿಸಿ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.
ನಮ್ಮ ತಂದೆ-ತಾಯಿಯರ ಪ್ರೀತಿ, ವಾತ್ಸಲ್ಯ, ಆದರತೆ ಹಾಗೂ ಆರ್ಶಿವಾದ ಇವೆಲ್ಲವೂ ಬರೀ ನಮ್ಮ ಬಾಲ್ಯದಲ್ಲಷ್ಟೇ ಸಾಕೇ? ಈ ರೀತಿ ತಂದೆ -ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವವರ ಬಗ್ಗೆ ನೀವು ಏನು ಹೇಳಲು ಇಷ್ಟಪಡ್ತೀರಿ? ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಕೆಳಗೆ ಕಾಮೆಂಟು ಮಾಡಿ. ಈ ಚರ್ಚೆಯಲ್ಲಿ ಪಾಲ್ಗೋಳ್ಳಿ.....
anukulakkae takkantae badalago namagae ondu vishaya nenapirabeku " etihasa marukalisuttae " anno vishaya... ega niv madadannae nim next generation madodu... love ur parents.. they r more for us...
ReplyDeleteChaithra Ns ಹೇಳಿದಂತೆ ಇತಿಹಾಸ ಮರುಕಳಿಸುತ್ತೆ. ನಾವು ಮಾಡಿದ್ದನ್ನೇ ನಮ್ಮ ಮಕ್ಕಳು - ಮೊಮ್ಮಕ್ಕಳು ಮಾಡುತ್ತಾರೆ ಎಂದು ಹೇಳುವುದು ನಿಜವೆನಿಸುತ್ತೆ. ನೀವೆನಂತೀರಾ..?
ReplyDeleteನನ್ನ ಅನಿಸಿಕೆ...:
ReplyDeleteತ೦ದೆ ತಾಯಿಯರ ಋಣವ ತೀರಿಸಲಾಗದು...
ಅದು ಅವರವರ ಮನಸ್ಸಿಗೆ ಬರಬೇಕು... ಹುಟ್ಟಿಗೆ ಕಾರಣೀಕರ್ತರೆ ಅವರು.. ಇಲ್ಲದಿದ್ದರೆ ನಾವು ಹೇಗೆ ಈ ಜಗತ್ತನ್ನು ನೋಡುತ್ತಿದೆವು..??
ಮದುವೆ ಮಾಡಿಕೊ೦ಡ ಮಗನು ಮೊದಲು ಸಯ್ಯಮದಿ೦ದ ಇರಬೇಕು.. ಎಲ್ಲವನ್ನು ತ೦ದೆ ತಾಯಿಯರ ಪರ ಮಾತನಾಡುವುದು ತಪ್ಪಾಗುತ್ತದೆ, ಮದುವೆ ಮಾಡಿಕೊ೦ಡು ಬ೦ದ ಮೇಲೆ ಆ ಹುಡುಗಿಯನ್ನು ನಮ್ಮ ಮನೆಯವಳ೦ತೆ, ಮಗಳ೦ತೆ ನೋಡಿಕೊಳ್ಳುವ ಜವಾವ್ದಾರಿ ತ೦ದೆ ತಾಯಿಯರಿಗಿರುತ್ತದೆ...
ಅಲ್ಲದೆ ಬ೦ದ ಹುಡುಗಿಗೂ ಸಮನಾದ ಹಕ್ಕು, ಪಾಲಿರುತ್ತದೆ ತನ್ನ ಮಗನ ಮೇಲೆ ಎ೦ಬ ಸತ್ಯ ಒಪ್ಪಿಕೊಳ್ಳಬೇಕು... ಸಾಮರಸ್ಯದ ಬದುಕು ಕ೦ಡುಕೊ೦ಡಲ್ಲಿ, ಯಾರೂ ವ್ರದ್ಧಾಶ್ರಮಕ್ಕೆ ಸೇರಿಸುವ ಮನ ಮಾಡುವುದಿಲ್ಲ ಅನ್ನುವುದು ನನ್ನ ಮಾತು.. ಮಗನಾಗೆ ಆ ಕೆಲಸ ಮಾಡುವುದಿಲ್ಲ ,ಹೆಚ್ಚಾಗಿ ಹೆ೦ಡತಿಯ ಮಾತು ಕೇಳಿ ಮಗ ಹೀಗೆ ಮಾಡಿದ ಎ೦ದು ದೂರುತ್ತಾರೆ, ಆದರೆ ಒ೦ದು ಕೈ ಯಿ೦ದ ತಟ್ಟಿದರೆ ಅದು ಚಪ್ಪಾಳೆ ಆಗದು... ಅಷ್ಟಕ್ಕೂ ಅವಳೂ ಕಾಡಿನಿ೦ದ ಬ೦ದವಳಲ್ಲ ತಾನೆ, ಅವಳು ತ೦ದೆ,ತಾಯಿಯರ ಪ್ರೀತಿ ಮಡಿಲಿನಲ್ಲೆ ಬೆಳೆದವಳು... ಗ೦ಡನ ಮನೆಗೆ ಬ೦ದಾಗ ಅತ್ತೆಯು ಅಮ್ಮನ ಸ್ತಾನ ತು೦ಬಿದರೆ ಇ೦ತ ಪರಿಸ್ತಿತಿ ಬರದು...
ಕೆಲ ಸ೦ದರ್ಭದಲ್ಲಿ ತ೦ದೆ, ತಾಯಿಯರಿಗೆ ಮಗನ ಮೇಲಿನ ಅತಿಯಾದ ಪ್ರೀತಿ ಈ ಪರಿಸ್ಥಿತಿ ತ೦ದುಕೊಡಲು ಕಾರಣವಾಗುತ್ತದೆ...